Go With The Flow

ತಿಂಗಳ ಮುಟ್ಟು ಬೇಗ ಆಗಲು ಏನು ಮಾಡಬೇಕು: ನಿಮ್ಮ ಮುಟ್ಟನ್ನು ಪ್ರಚೋದಿಸಲು ಪರಿಣಾಮಕಾರಿ ವಿಧಾನಗಳು (How to Get Your Periods Immediately: Effective Ways to Induce Your Period)

Rate this article
[Total: 9 Average: 3.7]

ಕೆಲವು ಸಮಯದಲ್ಲಿ ನಿಮ್ಮ ತಿಂಗಳ ಮುಟ್ಟು ತಡವಾಗಿರುವ ದಿನಗಳು ಇರುತ್ತವೆ. ಮತ್ತೆ ಅಪರೂಪಕ್ಕೆ ಒಮ್ಮೆ ನಿಮ್ಮ ಜೀವನದಲ್ಲಿ ಮುಟ್ಟು ತಡವಾಗಿರುವುದರಿಂದ ಬೇಗ ಬರಲೆಂದು ದೇವರಲ್ಲಿ ಬಹಳ ಪ್ರಾರ್ಥಿಸುವಿರಿ. ನಮ್ಮಲ್ಲಿ ಕೆಲವರು ಏಕೆ ಇದು ಎಂದು ಆಶ್ಚರ್ಯಪಡಬಹುದು. ಎಲ್ಲರಿಗೂ ತಮ್ಮ ಮುಟ್ಟು ಸರಿಯಾದ ಸಮಯಕ್ಕೆ ಬರಬೇಕು ಎಂದು ಬಯಸುತ್ತಾರೆ ಮತ್ತು ಸ್ವಲ್ಪ ತಡವಾದಲ್ಲಿ ಚಿಂತಿಸಲು ಏಕೆ ಪ್ರಾರಂಭಿಸುತ್ತಾರೆ? ಏಕೆಂದರೆ, ಮುಂದೆ ಮುಟ್ಟು ಬರುವುದಿದೆ ಎಂದರೆ ನಿಮ್ಮ ಪ್ರವಾಸವನ್ನು ಯೋಜಿಸಲು ಕಷ್ಟವಾಗುತ್ತದೆ, ಹಾಗಾಗಿ ಅದು ಬೇಗ ಮುಗಿದರೆ ಚೆನ್ನಾಗಿರುತ್ತದೆ ಎಂದು ಬಯಸುತ್ತಾರೆ. ಅಥವಾ ಅವರು ಗರ್ಭಿಣಿಯಾಗಲು ಯೋಜಿಸುತ್ತಿದ್ದರೆ, ಆಗ ಮುಟ್ಟು ಅನಿಯಮಿತವಾಗಿದ್ದಲ್ಲಿ ಕಷ್ಟವಾಗಬಹುದು. ಆದ್ದರಿಂದ, ಈ ಇಡೀ ಪ್ರಕ್ರಿಯೆಯನ್ನು ಹೆಚ್ಚು ಊಹಿಸಲು ಪ್ರಯತ್ನಿಸುತ್ತಾರೆ. ಅಥವಾ ತಮ್ಮ ಮುಟ್ಟು ಸಾಮಾನ್ಯವಾಗಿ ಬರುವ ದಿನಾಂಕಕ್ಕೆ ಬರದೆ ತಡವಾದಾಗ ಅವರಿಗೆ ಒಂದು ರೀತಿಯ ಒತ್ತಡ ಉಂಟಾಗುತ್ತದೆ.

ನಿಮ್ಮ ಮುಟ್ಟು ಏಕೆ ತಡವಾಗುತ್ತದೆ? (Why Are Your Periods Delayed?)

ನಿಮ್ಮ ಮುಟ್ಟನ್ನು ಪ್ರಚೋದಿಸುವ ಮಾರ್ಗಗಳನ್ನು ಅನ್ವೇಷಿಸುವ ಮೊದಲು, ನಿಮ್ಮ ಮುಟ್ಟು ಏಕೆ ವಿಳಂಬವಾಗುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ವಿಳಂಬವಾದ ಮುಟ್ಟಿಗೆ ಕಾರಣವಾಗುವ ಕೆಲವು ಸಾಮಾನ್ಯ ಅಂಶಗಳೆಂದರೆ:

  • ಒತ್ತಡ:ಒತ್ತಡದಿಂದ ಎಲ್ಲವೂ ಏರುಪೇರಾಗಬಹುದು ಮತ್ತು ಮಾನಸಿಕ ಮತ್ತು ಭಾವನಾತ್ಮಕ ಒತ್ತಡವು ಹಾರ್ಮೋನುಗಳ ಸಮತೋಲನಕ್ಕೆ ಅಡ್ಡಿಯುಂಟು ಮಾಡಬಹುದು. ಇದರಿಂದ ಮುಟ್ಟು ವಿಳಂಬವಾಗಬಹುದು.
  • ಹಾರ್ಮೋನುಗಳ ಅಸಮತೋಲನ: ಹಾರ್ಮೋನುಗಳಲ್ಲಿ ಏರುಪೇರು, ವಿಶೇಷವಾಗಿ ಈಸ್ಟ್ರೋಜಿನ್ ಮತ್ತು ಪ್ರೊಜೆಸ್ಟ್ರಟ್ರಾನ್ ನಿಮ್ಮ ನಿಯಮಿತ ಋತುಚಕ್ರದ ಮೇಲೆ ಪರಿಣಾಮ ಬೀರಬಹುದು.
  • ದೇಹದ ತೂಕ:ಕಡಿಮೆ ಅವಧಿಯಲ್ಲಿ ಗಣನೀಯ ತೂಕನಷ್ಟ ಅಥವಾ ತೂಕ ಹೆಚ್ಚಾಗುವಿಕೆಯಿಂದ ಹಾರ್ಮೋನುಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಿ ಅನಿಯಮಿತ ಮುಟ್ಟಿಗೆ ಕಾರಣವಾಗಬಹುದು.
  • ವೈದ್ಯಕೀಯ ಪರಿಸ್ಥಿತಿಗಳು:ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಓಎಸ್), ಥೈರಾಯ್ಡ್ ಅಸ್ವಸ್ಥತೆಗಳು, ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳಂತಹ ಹಲವು ವೈದ್ಯಕೀಯ ಪರಿಸ್ಥಿತಿಗಳು ಋತುಚಕ್ರದ ಅನಿಯಮಿತತೆಗೆ ಕಾರಣವಾಗಬಹುದು.
  • ಔಷಧೋಪಚಾರಗಳು: ಹಾರ್ಮೋನುಗಳ ಕಾಂಟ್ರಾಸೆಪ್ಟಿವ್ಸ್ ಅಥವಾ ಆ್ಯಂಟಿಡಿಪ್ರೆಸೆಂಟ್ಸ್ ನಂತಹ ಟಿಕೆಲವು ಔಷಧಿಗಳು ಋತುಚಕ್ರದ ಮೇಲೆ ಪರಿಣಾಮ ಬೀರಬಹುದು.

ತಿಂಗಳ ಮುಟ್ಟು ಬೇಗ ಆಗಲು ಏನು ಮಾಡಬೇಕು? (How to make periods come faster?)

ಹೌದು! ಇದು ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಇದು ಸಾಧ್ಯ. ನಿಮ್ಮ ಮುಟ್ಟು ಬೇಗ ಬರಲು ಸಹಾಯ ಮಾಡುವ ಕೆಲವು ಆಹಾರಗಳು ಇವೆ. ಈ ಆಹಾರಗಳು ಗರ್ಭಕೋಶ ಸಂಕೋಚನಗಳನ್ನು ಉಂಟು ಮಾಡಿ, ಗರ್ಭಕೋಶದ ಒಳಪದರವನ್ನು ಮೃದುವಾಗಿಸಿ, ನಿಮ್ಮ ದೇಹದಲ್ಲಿ ಹೆಚ್ಚು ಈಸ್ಟ್ರೋಜಿನ್ ಹಾರ್ಮೋನ್ ಉತ್ಪಾದನೆಯಾಗುವಂತೆ ಮಾಡಿ ಮುಟ್ಟು ಬರಲು ಸಹಾಯ ಮಾಡಬಹುದು.

ಬೇಗ ಮುಟ್ಟಾಗಲು ಮನೆಮದ್ದು (Effective Home Remedies to get Periods Immediately)

ನಿಮ್ಮ ಪ್ರೇರಣೆಗಳು ಏನೇ ಇದ್ದರೂ ಈ ಮನೆಮದ್ದುಗಳು ನಿಮಗೆ ಬೇಗ ಮುಟ್ಟಾಗಲು ಹೇಗೆ ಪ್ರಚೋದಿಸಬೇಕು ಎಂಬುದರ ಕುರಿತು ನಿಮಗೆ ಮಾರ್ಗದರ್ಶನ ನೀಡುತ್ತವೆ.

  • ಪಾರ್ಸ್ಲಿ (Parsley)

ಪಾರ್ಸ್ಲಿ ಎಂಬುದು ಗರ್ಭಕೋಶದ ಸಂಕೋಚನಗಳನ್ನು ಪ್ರಚೋದಿಸುವಲ್ಲಿ ಸಹಾಯ ಮಾಡುತ್ತದೆ. ಇದು ಅತಿ ಹೆಚ್ಚು ವಿಟಮಿನ್ ಸಿ ಮತ್ತು ಆಪಿಯಾಲ್ ಅನ್ನು ಹೊಂದಿದೆ. ಗರ್ಭಿಣಿಯರಿಗೆ ಅಥವಾ ಗರ್ಭಧರಿಸಲು ಪ್ರಯತ್ನಿಸುವವರಿಗೆ, ಅಥವಾ ಮೊಲೆಹಾಲು ಕುಡಿಸುವ ತಾಯಂದಿರಿಗೆ ಅಥವಾ ಮೂತ್ರಕೋಶದ ಸಮಸ್ಯೆಗಳು ಇರುವವರಿಗೆ ಇದನ್ನು ಹೆಚ್ಚಾಗಿ ಸೇವಿಸಲು ನಾವು ಶಿಫಾರಸ್ಸು ಮಾಡುವುದಿಲ್ಲ. ಪಾರ್ಸ್ಲಿ ಟೀಯನ್ನು ತಯಾರಿಸಲು ತಾಜಾ ಪಾರ್ಸ್ಲಿಯನ್ನು ಎರಡು ಟೇಬಲ್ ಚಮಚ ತೆಗೆದುಕೊಂಡು ಕುದಿಯುವ ನೀರನ್ನು ಸುರಿದು ಅದನ್ನು 5 ನಿಮಿಷ ಹಾಗೆ ಬಿಟ್ಟು ಕುಡಿಯಬೇಕು.

  • ಜೀರಿಗೆ (Cumin)

ಜೀರಿಗೆ ಗರ್ಭಕೋಶದ ಒಳಪದರದಲ್ಲಿ ಸಂಕೋಚನಗಳನ್ನು ಉಂಟು ಮಾಡಿ ನಿಮ್ಮ ಮುಟ್ಟು ನಿಯಮಿತವಾಗುವಲ್ಲಿ ಸಹಾಯ ಮಾಡುತ್ತದೆ. ಸುಮಾರು 1-2 ಟೇಬಲ್ ಚಮಚ ಜೀರಿಗೆಯನ್ನು ರಾತ್ರಿ ಇಡೀ ನೀರಿನಲ್ಲಿ ನೆನೆಸಿ ಕಡಿಯಬಹುದು ಅಥವಾ ಅದನ್ನು 2-3 ನಿಮಿಷದವರೆಗೆ ಕುದಿಸಿ ಆ ನೀರನ್ನು ತಣ್ಣಗಾದ ನಂತರ ಶೋಧಿಸಿ ಕುಡಿಯಬಹುದು. ಮುಟ್ಟನ್ನು ಪ್ರಚೋದಿಸಲು ಈ ಸಾಂಪ್ರದಾಯಿಕ ಮನೆಮದ್ದನ್ನು ಹಲವಾರು ತಲೆಮಾರುಗಳಿಂದ ಬಳಸಲ್ಪಟ್ಟಿದೆ.

  • ಪರಂಗಿ (Papayas)

ಪರಂಗಿ ಹಣ್ಣ ಅಥವಾ ಕಾಯಿಯಲ್ಲಿ ಈಸ್ಟ್ರೋಜಿನ್ ಮಟ್ಟವನ್ನು ಹೆಚ್ಚಿಸುವಂತಹ ಕೆರೋಟಿನ್ ಇರುವುದರಿಂದ ಇದು ಮುಟ್ಟು ಪ್ರಾರಂಭವಾಗಲು ಸಹಾಯ ಮಾಡುತ್ತದೆ. ನಿಮ್ಮ ತಿಂಗಳ ಮುಟ್ಟು ಪ್ರಾರಂಭವಾಗುವ ಹಲವು ದಿನಗಳಿಗಿಂತ ಮುಂಚೆ ಇದನ್ನು ಪ್ರತಿನಿತ್ಯ ತಿನ್ನಲು ಶಿಫಾರಸ್ಸು ಮಾಡಲಾಗಿದೆ.

  • ಶುಂಠಿ (Ginger)

ಇದು ವೈಜ್ಞಾನಿಕವಾಗಿ ಸಾಬೀತಾಗದಿದ್ದರೂ ಶುಂಠಿಯು ಮುಟ್ಟು ಬೇಗ ಆಗುವಂತೆ ಪ್ರಚೋದಿಸಲು ಒಂದು ಅದ್ಭುತ ಮೂಲಿಕೆ. ಶುಂಠಿಯನ್ನು ಜಗಿದು ತಿನ್ನುವುದು ನಿಮಗೆ ಸಾಧ್ಯವಾಗದಿದ್ದಲ್ಲಿ ಅದರಿಂದ ಶುಂಠಿ ಚಹಾ ಮಾಡಿ ಕುಡಿಯಬಹುದು. ಶುಂಠಿಯ ಮೇಲಿನ ಸಿಪ್ಪೆಯನ್ನು ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ 5-7 ನಿಮಿಷಗಳವರೆಗೆ ನೀರಿನಲ್ಲಿ ಅದನ್ನು ಕುದಿಸಿ. ಅದನ್ನು ಶೋಧಿಸಿ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಸೇವಿಸಬಹುದು. ನೋಡಿದಿರಲ್ಲ! ನಿಮ್ಮ ಶುಂಠಿ ಚಹಾ ರೆಡಿ.

  • ಅರಿಶಿಣ (Turmeric)

ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಅರಿಶಿಣ ಒಂದು ಒಳ್ಳೆಯ ಮನೆಮದ್ದು. ಈ ಚಿನ್ನದ ಪುಡಿಯಲ್ಲಿ ಸಾಕಷ್ಟು ಗುಣಪಡಿಸುವ ಗುಣಗಳಿವೆ. ಅರಿಶಿಣ ಗರ್ಭಾಶಯವನ್ನು ವಿಸ್ತರಿಸಲು ಸಹಾಯ ಮಾಡಿ ರಕ್ತದ ಹರಿವನ್ನು ಪ್ರಚೋದಿಸುತ್ತದೆ. ನೀವು ಜೇನುತುಪ್ಪ ಮತ್ತು ಅರಿಶಿಣ ಹಾಲು, ಕಷಾಯ ಅಥವಾ ಮಸಾಲ ಪದಾರ್ಥವಾಗಿ ಅರಿಶಿಣವನ್ನು ಅಡುಗೆಗಳಲ್ಲಿ ಕೂಡ ಬಳಸಬಹುದು.

  • ಕೊತ್ತಂಬರಿ ಬೀಜ (Coriander Seeds)

ತಿಂಗಳ ಮುಟ್ಟು ಬೇಗ ಆಗಲು ಏನು ಮಾಡಬೇಕು? ಕೊತ್ತಂಬರಿ ಬೀಜಗಳು ನಿಮ್ಮ ಅತ್ಯುತ್ತಮ ಸ್ನೇಹಿ! ಋತುಸ್ರಾವವನ್ನು ಹೆಚ್ಚಿಸುವಲ್ಲಿ ಒಂದು ಅತ್ಯುತ್ತಮ ಮುಟ್ಟು-ಪ್ರಚೋದಕವಾಗಿದೆ. ಸ್ವಲ್ಪ ಕೊತ್ತಂಬರಿ ಬೀಜಗಳನ್ನು ತೆಗೆದುಕೊಂಡು ನೀರು ಅರ್ಧ ಭಾಗ ಆಗುವವರೆಗೆ ಕುದಿಸಿ. ಅದು ತಣಿದ ನಂತರ ದಿನಕ್ಕೆ ಮೂರು ಬಾರಿ ಕುಡಿಯಿರಿ. ನಿಮ್ಮ ತಿಂಗಳ ಮುಟ್ಟು ಪ್ರಾರಂಭವಾಗುವ ಕೆಲವು ದಿನಗಳಿಗಿಂತ ಮುಂಚೆ ಪ್ರತಿನಿತ್ಯ ಇದನ್ನು ಕುಡಿಯಿರಿ. ನಿಮ್ಮ ಗರ್ಭದಲ್ಲಿ ಫಲವತ್ತತೆಯ ದೇವಿ ತಾಂಡವವಾಡಿ ಸಾಕಷ್ಟು ರಕ್ತದ ಹರಿವುಂಟಾಗುತ್ತದೆ.

  • ಸೋಂಪು ಕಾಳು (Fennel Seeds)

ನಿಮ್ಮ ತಿಂಗಳ ಮುಟ್ಟು ಪ್ರಾರಂಭವಾಗುವ ಕೆಲವು ದಿನಗಳಿಗಿಂತ ಮುಂಚೆ ಪ್ರತಿದಿನ ಬೆಳಗ್ಗೆ ಸೋಂಪು ಕಾಳಿನ ಸುವಾಸನೆಯುಳ್ಳ ಕಷಾಯವನ್ನು ಸ್ವಲ್ಪ ದಿನಗಳವರೆಗೆ ಕುಡಿಯಿರಿ. ಇದನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಆ ನೀರನ್ನು ಮರುದಿನ ಬೆಳಗ್ಗೆ ಎದ್ದು ಕುಡಿಯಬಹುದು.

ನಿಮ್ಮ ತಿಂಗಳ ಮುಟ್ಟು ಬೇಗ ಬರಲು ಯೋಗ ಆಸನಗಳು (Yoga Asanas to Get Periods Faster)

ಯೋಗವು ಪ್ರಾಚೀನ ಅಭ್ಯಾಸವಾಗಿದ್ದು, ಹಾರ್ಮೋನುಗಳ ಸಮತೋಲನವನ್ನು ಉತ್ತೇಜಿಸುವ ಮತ್ತು ಋತುಚಕ್ರವನ್ನು ನಿಯಂತ್ರಿಸುವ ಸಾಮರ್ಥ್ಯ ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಯೋಗವು ತಕ್ಷಣವೇ ಮುಟ್ಟನ್ನು ಪ್ರಚೋದಿಸುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿಲ್ಲವಾದರೂ, ಮಲಾಸನ, ಉಷ್ಟ್ರಾಸನ ಮತ್ತು ಮತ್ಸ್ಯಾಸನದಂತಹ ಕೆಲವು ಯೋಗ ಆಸನಗಳು ಸಂತಾನೋತ್ಪತ್ತಿ ಅಂಗಗಳನ್ನು ಉತ್ತೇಜಿಸುತ್ತವೆ, ಪೆಲ್ವಿಕ್ ಪ್ರದೇಶಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತವೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತವೆ ಎಂದು ನಂಬಲಾಗಿದೆ, ಇವೆಲ್ಲವೂ ಕಾಲಾನಂತರದಲ್ಲಿ ಋತುಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಎಲ್ಲಿ ಪ್ರಾರಂಭಿಸಬೇಕೆಂದು ನಿಮಗೆ ತಿಳಿದಿಲ್ಲದಿದ್ದರೆ, ಆರಂಭಿಕ ಅಥವಾ ಲೆವೆಲ್ 1 ಯೋಗವನ್ನು ಆನ್ ಲೈನ್ ನಲ್ಲಿ ನೋಡಿ. ದಿನಕ್ಕೆ 30 ರಿಂದ 40 ನಿಮಿಷಗಳ ಕಾಲ, ವಾರಕ್ಕೆ 5 ಬಾರಿ ಯೋಗಾಭ್ಯಾಸ ಮಾಡುವುದರಿಂದ ಹಾರ್ಮೋನುಗಳನ್ನು ನಿಯಂತ್ರಿಸಲು ಮತ್ತು ನಿಮ್ಮ ಋತುಚಕ್ರವನ್ನು ಮತ್ತೆ ಹಳಿಗೆ ತರಲು ಸಹಾಯ ಮಾಡುತ್ತದೆ.

ತಕ್ಷಣ ಮುಟ್ಟಾಗಲು ಜೀವನಶೈಲಿಯ ಬದಲಾವಣೆಗಳು (Lifestyle Changes to Get Periods Immediately)

ನಿಮ್ಮ ಋತುಚಕ್ರವನ್ನು ನಿಯಂತ್ರಿಸುವಲ್ಲಿ ಮತ್ತು ಒಟ್ಟಾರೆ ಹಾರ್ಮೋನುಗಳ ಸಮತೋಲನವನ್ನು ಉತ್ತೇಜಿಸುವಲ್ಲಿ ಜೀವನಶೈಲಿ ಬದಲಾವಣೆಗಳು ಮಹತ್ವದ ಪಾತ್ರವಹಿಸುತ್ತವೆ. ನಿಮ್ಮ ಋತುಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಜೀವನಶೈಲಿ ಹೊಂದಾಣಿಕೆಗಳು ಇಲ್ಲಿವೆ:

  • ಒತ್ತಡವನ್ನು ನಿರ್ವಹಿಸಿ: ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಧ್ಯಾನ, ಆಳವಾದ ಉಸಿರಾಟದ ವ್ಯಾಯಾಮಗಳು ಅಥವಾ ಪ್ರಕೃತಿಯಲ್ಲಿ ಸಮಯ ಕಳೆಯುವಂತಹ ವಿಶ್ರಾಂತಿ ತಂತ್ರಗಳನ್ನು ಅಳವಡಿಸಿಕೊಳ್ಳಿ. ನೀವು ಆನಂದಿಸುವ ಚಟುವಟಿಕೆಗಳಲ್ಲಿ ತೊಡಗುವುದು ಒತ್ತಡವನ್ನು ನಿವಾರಿಸಲು ಸಹ ಪ್ರಯೋಜನಕಾರಿಯಾಗಿದೆ.
  • ನಿಯಮಿತವಾಗಿ ವ್ಯಾಯಾಮ ಮಾಡಿ: ನಿಯಮಿತ ದೈಹಿಕ ಚಟುವಟಿಕೆಯು ಹಾರ್ಮೋನ್ ನಿಯಂತ್ರಣ ಮತ್ತು ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುತ್ತದೆ. ಚುರುಕಾದ ವಾಕಿಂಗ್, ಸೈಕ್ಲಿಂಗ್ ಅಥವಾ ಈಜು ಮುಂತಾದ ಮಿತವಾದ ವ್ಯಾಯಾಮಗಳನ್ನುಮಾಡಿ. ಅತಿಯಾದ ಮತ್ತು ತೀವ್ರವಾದ ವ್ಯಾಯಾಮಗಳನ್ನು ತಪ್ಪಿಸಿ, ಏಕೆಂದರೆ ಅವು ವಾಸ್ತವವಾಗಿ ಅನಿಯಮಿತ ಋತುಚಕ್ರಕ್ಕೆ ಕಾರಣವಾಗಬಹುದು.
  • ಸಮತೋಲಿತ ಆಹಾರವನ್ನು ಅನುಸರಿಸಿ: ನಿಮಗೆ ಅಗತ್ಯವಿರುವ ಎಲ್ಲಾ ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಆರಿಸಿ. ಸಂಸ್ಕರಿಸಿದ ಆಹಾರಗಳು, ಸಕ್ಕರೆ ತಿಂಡಿಗಳು, ಕೆಫೀನ್ ಮತ್ತು ಆಲ್ಕೋಹಾಲ್ ನ ಅತಿಯಾದ ಸೇವನೆಯು ನಿಮ್ಮ ಋತುಚಕ್ರಕ್ಕೆ ಅಡ್ಡಿಪಡಿಸುತ್ತದೆ.
  • ಸಾಕಷ್ಟು ನಿದ್ದೆ ಮಾಡಿ: ಹಾರ್ಮೋನುಗಳ ಸಮತೋಲನಕ್ಕೆ ಸಾಕಷ್ಟು ವಿಶ್ರಾಂತಿಯ ನಿದ್ದೆಯನ್ನು ಪಡೆಯುವುದು ಅತ್ಯಗತ್ಯ. ನಿಮ್ಮ ದೇಹದ ನೈಸರ್ಗಿಕ ಲಯಗಳನ್ನು ಬೆಂಬಲಿಸಲು ಪ್ರತಿ ರಾತ್ರಿ 7-9 ಗಂಟೆಗಳ ನಿದ್ರೆಯನ್ನು ಮಾಡಲು ಪ್ರಯತ್ನಿಸಿ.
  • ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ: ಕಡಿಮೆ ತೂಕ ಮತ್ತು ಅಧಿಕ ತೂಕ ಎರಡೂ ಹಾರ್ಮೋನುಗಳ ಸಮತೋಲನ ಮತ್ತು ಋತುಚಕ್ರದ ನಿಯಮಿತತೆಯ ಮೇಲೆ ಪರಿಣಾಮ ಬೀರುತ್ತದೆ. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಸಂಯೋಜನೆಯ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ.

ಜೀವನಶೈಲಿಯಲ್ಲಿನ ಸಕಾರಾತ್ಮಕ ಬದಲಾವಣೆಗಳು ನಿಮ್ಮ ಋತುಚಕ್ರದ ಮೇಲೆ ಪರಿಣಾಮ ಬೀರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂಬುದನ್ನು ನೆನಪಿಡಿ. ಈ ಹೊಂದಾಣಿಕೆಗಳನ್ನು ನಿರಂತರವಾಗಿ ಕಾರ್ಯಗತಗೊಳಿಸುವಲ್ಲಿ ತಾಳ್ಮೆವಹಿಸಿ. ಸ್ವಲ್ಪ ಸಮಯದ ನಂತರ ನೀವು ಪಟ್ಟ ಶ್ರಮಕ್ಕೆ ಪ್ರತಿಫಲ ಖಂಡಿತವಾಗಿ ಸಿಗುತ್ತದೆ.

ಮುಟ್ಟನ್ನು ಪ್ರಚೋದಿಸುವ ಅಪಾಯಗಳು (Risks of inducing periods)

ನಿಮಗೆ ನಿಮ್ಮ ಮುಟ್ಟನ್ನು ಪ್ರಚೋದಿಸಲು ಹಲವಾರು ಕಾರಣಗಳಿರಬಹುದು, ಆದರೆ ಇದು ಸ್ವಾಭಾವಿಕವಾಗಿ ಸಂಭವಿಸುವ ಋತುಚಕ್ರದ ವಿರುದ್ಧ ಮಾಡುವುದಾಗಿರುತ್ತದೆ. ಖಂಡಿತವಾಗಿಯೂ ಇದರದೇ ಆದ ಅಪಾಯಗಳು ಕೂಡ ಇರುತ್ತವೆ. ಮುಟ್ಟನ್ನು ಪ್ರಚೋದಿಸುವುದು ತಮಾಷೆಯ ವಿಷಯವಲ್ಲ. ಮೇಲೆ ತಿಳಿಸಿರುವ ಎಲ್ಲಾ ಮನೆಮದ್ದುಗಳನ್ನು ಸ್ವಲ್ಪ ಮಟ್ಟಿಗಿನ ಅಪಾಯ ಅಥವಾ ಅಪಾಯವೇ ಇಲ್ಲದೆ ನೀವು ಪ್ರಯತ್ನಿಸಬಹುದು. ನಿಮಗೆ ಈ ಮೇಲಿ ಸಾಮಗ್ರಿಗಳಲ್ಲಿ ಯಾವುದಕ್ಕಾದರೂ ಅಲರ್ಜಿ  ಇದ್ದರೆ ಮಾತ್ರ ಅದನ್ನು ತೆಗೆದುಕೊಳ್ಳಬೇಡಿ.

ಮುಟ್ಟನ್ನು ಪ್ರಚೋದಿಸಲು ಔಷಧಿಗಳನ್ನು ಸೇವಿಸುವುದು ಸುರಕ್ಷಿತವೇ? (Is It Safe to Take Medications to Induce Periods?)

ನೀವು ನಿಮ್ಮ ಮುಟ್ಟನ್ನು ಪ್ರಚೋದಿಸಲು ಔಷಧಿಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಆಲೋಚಿಸುತ್ತಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಅವರು ನಿಮ್ಮ ನಿರ್ದಿಷ್ಟ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ಸೂಕ್ತವಾದ ಔಷಧಿಗಳನ್ನು ಸೂಚಿಸಬಹುದು. ಸ್ವಯಂ-ವೈದ್ಯ ಮಾಡುವುದರಿಂದ ಅಪಾಯಕ್ಕೊಳಗಾಗಿ ಅನಗತ್ಯ ಅಡ್ಡ-ಪರಿಣಾಮಗಳಿಗೆ ಕಾರಣವಾಗಬಹುದು.

ಯಾವಾಗ ವೈದ್ಯರನ್ನು ಕಾಣಬೇಕು? (When to see a doctor?)

ನೀವು ಪ್ರೌಢಾವಸ್ಥೆಯನ್ನು ತಲುಪಿದಾಗ, ಗರ್ಭಾವಸ್ಥೆಯ ನಂತರ ಮತ್ತು ಮುಟ್ಟು ನಿಲ್ಲುವುದಕ್ಕಿಂತ ಮುಂಚೆ ನಿಮ್ಮ ಮುಟ್ಟು ಪ್ರತಿ ತಿಂಗಳೂ ಏರುಪೇರಾಗುವುದು ಸರ್ವೇ ಸಾಮಾನ್ಯ. ಆದರೆ, ನಿಮ್ಮ ಮುಟ್ಟು ಹಠಾತ್ತೆಂದು ಅನಿಯಮಿತವಾದಲ್ಲಿ ನೀವು ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರನ್ನು ತಕ್ಷಣ ಸಂಪರ್ಕಿಸುವುದು ಒಳ್ಳೆಯದು. ನಿಮ್ಮ ಮುಟ್ಟು ಹೇಗೆ ಬೇಗ ಬರಬೇಕು ಎಂಬುದರ ಬಗ್ಗೆ ಮಾರ್ಗಸೂಚಿ ಇದಾಗಿತ್ತು. ನಿಮ್ಮ ದೇಹವು ನಿರ್ವಹಿಸುವ ಇತರ ಸಂಪೂರ್ಣ ವಿಸ್ಮಯಕಾರಿ ಸಂತಾನೋತ್ಪತ್ತಿ ಕಾರ್ಯಗಳ ಮೂಲಕ ನಿಮಗೆ ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ. ನೀವು ಅವುಗಳನ್ನು ಕೆಳಗಿನ ಕಾಮೆಂಟ್ ವಿಭಾಗದಲ್ಲಿ ಬರೆಯಬೇಕು. ಮುಂದಿನ ಸಮಯದವರೆಗೆ! 🙂

ಆಗಾಗ ಕೇಳಲಾಗುವ ಪ್ರಶ್ನೆಗಳು (ಎಫ್ಎಕ್ಯೂಗಳು (FAQs🙂

ನಿಮ್ಮ ತಿಂಗಳ ಮುಟ್ಟು ಬೇಗ ಬರಲು ಅತ್ಯುತ್ತಮ ಆಹಾರ ಯಾವುದು? (What is the best food to get periods early?)

ನಿಮ್ಮ ತಿಂಗಳು ಮುಟ್ಟು ಬೇಗ ಬರಲು ಈ ಕೆಳಗೆ ಕೆಲವು ಆಹಾರಗಳನ್ನು ನೀಡಲಾಗಿದೆ:

  • ಪಾರ್ಸ್ಲಿ
  • ಜೀರಿಗೆ
  • ಪರಂಗಿ
  • ಶುಂಠಿ
  • ಅರಿಶಿಣ
  • ಕೊತ್ತಂಬರಿ ಬೀಜ
  • ಸೋಂಪು ಕಾಳು

ನಿಮ್ಮ ತಿಂಗಳ ಮುಟ್ಟು ಬೇಗ ಬರಲು ಯಾವುದು ಅತ್ಯುತ್ತಮವಾದ ಮಲಗುವ ಭಂಗಿಯಾಗಿದೆ? (What is the best sleeping position to get periods early?)

ಮಲಗುವ ಭಂಗಿಗಳು ನಿಮ್ಮ ಋತುಚಕ್ರದ ಸಮಯದ ಮೇಲೆ ಪ್ರಭಾವ ಬೀರುತ್ತವೆ ಎಂಬ ಕಲ್ಪನೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಋತುಚಕ್ರವು ಹಾರ್ಮೋನುಗಳ ಬದಲಾವಣೆಗಳಿಂದ ನಿಯಂತ್ರಿಸಲ್ಪಡುತ್ತದೆ, ಮತ್ತು ನಿದ್ರೆಯ ಭಂಗಿಯು ಮುಟ್ಟು ಬರುವಂತೆ ಪ್ರಚೋದಿಸುವಲ್ಲಿ ಪಾತ್ರ ವಹಿಸುವುದಿಲ್ಲ.

ತಿಂಗಳ ಮುಟ್ಟು ಎಷ್ಟು ದಿನಗಳವರೆಗೆ ವಿಳಂಬವಾಗುವುದು ಸಾಮಾನ್ಯ? (How much delay in periods is normal?)

ಋತುಚಕ್ರದ ಅವಧಿಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಒಂದು ಸಾಮಾನ್ಯ ಋತುಚಕ್ರವು 21 ರಿಂದ 35 ದಿನಗಳೊಳಗಿದ್ದು 3 ರಿಂದ 7  ದಿನಗಳವರೆಗೆ ರಕ್ತಸ್ರಾವವಿರುತ್ತದೆ. ಅಪರೂಪಕ್ಕೊಮ್ಮೆ ನಿಮ್ಮ ಋತುಚಕ್ರದ ಅವಧಿಯಲ್ಲಿ ಬದಲಾವಣೆಗಳುಂಟಾಗಬಹುದು. ಇದು ಒತ್ತಡ, ಹಾರ್ಮೋನುಗಳ ಬದಲಾವಣೆ, ಆಹಾರಕ್ರಮ ಅಥವಾ ಜೀವನಶೈಲಿಗಳಂತಹ ಅಂಶಗಳಿಗೆ ಒಳಗಾಗಬಹುದು. ಆದರೆ, ನೀವು ನಿರಂತರವಾಗಿ ನಿಮ್ಮ ಋತುಚಕ್ರದಲ್ಲಿ ಅನಿಯಮಿತತೆಗಳನ್ನು ಅನುಭವಿಸುತ್ತಿದ್ದರೆ ಅಥವಾ ನಿಮ್ಮ ಮುಟ್ಟು ಪ್ರತಿ ತಿಂಗಳೂ ವಿಳಂಬವಾಗುತ್ತಿದ್ದರೆ ಯಾವುದೇ ಇತರ ಅನಾರೋಗ್ಯಗಳನ್ನು ಪತ್ತೆಹಚ್ಚಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಯಾವ ಮಾತ್ರೆ ತೆಗೆದುಕೊಂಡರೆ ಮುಟ್ಟು ತಕ್ಷಣ ಪ್ರಾರಂಭವಾಗುತ್ತದೆ? (Which tablet helps periods immediately?)

ಅಂಗಡಿಗಳಲ್ಲಿ ಸಿಗುವ ಯಾವುದೇ ಓವರ್-ದಿ-ಕೌಂಟರ್ ಗುಳಿಗೆಗಳು ಅಥವಾ ಔಷಧಿಗಳು ಮುಟ್ಟನ್ನು ತಕ್ಷಣ ಪ್ರಚೋದಿಸಲು ಇಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ನಿಮ್ಮ ಮುಟ್ಟನ್ನು ನಿಯಮಿತವಾಗಿಸಲು ಹಾರ್ಮೋನು ಔಷಧಿಗಳಾದ ಓರಲ್ ಕಾಂಟ್ರಾಸೆಪ್ಟಿವ್ಸ್ ಅನ್ನು ಕೆಲವು ಸಂದರ್ಭಗಳಲ್ಲಿ ವೈದ್ಯರು ನಿಮಗೆ ಸೂಚಿಸಬಹುದು. ಆದರೆ ಇವುಗಳನ್ನು ವೈದ್ಯರ ಸಲಹೆ ಮತ್ತು ಶಿಫಾರಸ್ಸಿನ ಮೇರೆಗೆ ಮಾತ್ರ ಬಳಸಬೇಕು.

ಮುಟ್ಟನ್ನು ತಕ್ಷಣ, ಅಂದರೆ ಒಂದು ದಿನದಲ್ಲಿ/ಒಂದು ಗಂಟೆಯಲ್ಲಿ ಪಡೆಯುವುದು ಹೇಗೆ? (How to get periods immediately in one day/one hour?)

ಒಂದು ದಿನ ಅಥವಾ ಒಂದು ಗಂಟೆಯಲ್ಲಿ ತಿಂಗಳ ಮುಟ್ಟನ್ನು ಪ್ರಚೋದಿಸಲು ವೈದ್ಯಕೀಯವಾಗಿ ಸಾಧ್ಯವಿಲ್ಲ. ಗರ್ಭಾಶಯದ ಒಳಪದರವು ತೊರೆದಾಗ ಮುಟ್ಟು ಸಂಭವಿಸುತ್ತದೆ, ಮತ್ತು ಈ ಪ್ರಕ್ರಿಯೆಯನ್ನು ಒಂದು ಗಂಟೆ ಅಥವಾ ಒಂದು ದಿನದ ಅಲ್ಪಾವಧಿಯಲ್ಲಿ ವೇಗಗೊಳಿಸಲು ಅಥವಾ ಒತ್ತಾಯಿಸಲು ಸಾಧ್ಯವಿಲ್ಲ.

ಒಂದು ರಾತ್ರಿಯಲ್ಲಿ ಮುಟ್ಟನ್ನು ಪಡೆಯುವುದು ಹೇಗೆ? (How to get periods overnight?)

ನೀವು ಒಂದೇ ರಾತ್ರಿಯಲ್ಲಿ ಮುಟ್ಟನ್ನು ಪಡೆಯಲು ಸಾಧ್ಯವಿಲ್ಲ. ಅದನ್ನು ಪ್ರಚೋದಿಸಲು ಸ್ವಾಭಾವಿಕ ಮಾರ್ಗಗಳಿವೆ, ಆದಾಗ್ಯೂ ಅದು ಸಂಭವಿಸಲು ಸ್ವಲ್ಪ ದಿನಗಳು ಬೇಕಾಗುತ್ತವೆ. 2 ತಿಂಗಳಿಗಿಂತ ಹೆಚ್ಚಾಗಿ ನಿಮಗೆ ಮುಟ್ಟು ಬರದಿದ್ದರೆ ಒರಟಾಗಿ ಏನನ್ನೂ ಮಾಡಬೇಡಿ, ಏನಾದರೂ ಆಗುವ ಮುಂಚೆ ವೈದ್ಯರನ್ನು ಸಂಪರ್ಕಿಸಿ.

ಒಂದು ಗಂಟೆಯಲ್ಲಿ ಮುಟ್ಟನ್ನು ಪಡೆಯುವುದು ಹೇಗೆ? (How to get your period in one hour?)

ಒಂದು ಗಂಟೆಯಲ್ಲಿ ಅಥವಾ ಒಂದು ದಿನದೊಳಗಾಗಿ ತಿಂಗಳ ಮುಟ್ಟನ್ನು  ಪಡೆಯಲು ಸಾಧ್ಯವಿಲ್ಲ. ಕೆಲವು ಮನೆಮದ್ದುಗಳಿವೆ, ಅವುಗಳನ್ನು ತೆಗೆದುಕೊಂಡರೂ ನಿಮ್ಮ ತಿಂಗಳ ಮುಟ್ಟು ಪ್ರಾರಂಭವಾಗಲು ಸ್ವಲ್ಪ ದಿನಗಳು ಬೇಕಾಗುತ್ತದೆ. ಅದುವರೆಗೆ ನಿಮ್ಮ ಮುಟ್ಟನ್ನು ಪ್ರಚೋದಿಸಲು ಈ ಮನೆಮದ್ದುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ:

  • ಪಾರ್ಸ್ಲಿ
  • ಜೀರಿಗೆ
  • ಪರಂಗಿ
  • ಶುಂಠಿ
  • ಅರಿಶಿಣ

ನನ್ನ ತಿಂಗಳ ಮುಟ್ಟು ಬೇಗ ಬರುವಂತೆ ಮಾಡಬಹುದೇ? (Can I make my period come quickly?)

ಹೌದು, ನಿಮ್ಮ ಮುಟ್ಟನ್ನು ಪ್ರಚೋದಿಸಲು ಕೆಲವು ಸ್ವಾಭಾವಿಕ ವಿಧಾನಗಳಿವೆ. ನೀವು ಪರಂಗಿ, ಅರಿಶಿಣ ಕಷಾಯ, ಅರಿಶಿಣ-ಹಾಲು, ಶುಂಠು ಚಹಾ ಇತ್ಯಾದಿಗಳನ್ನು ಸೇವಿಸಬಹುದು. ನಿಮ್ಮ ತಿಂಗಳು ಮುಟ್ಟು ಬೇಗ ಬರುವಂತೆ ಈ ವಿಧಾನಗಳಿಂದ ಸಾಧ್ಯ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ, ಆದರೆ ಅವೆಲ್ಲ ಸುರಕ್ಷಿತ ಮತ್ತು ಕೆಲವರಿಗೆ ಇದು ಕೆಲಸ ಮಾಡಬಹುದು. ನೀವು ಯಾವುದಾದರೂ ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅಥವಾ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಅಥವಾ ಯಾವುದಕ್ಕಾದರೂ ಅಲರ್ಜಿ ಇದ್ದಲ್ಲಿ ವೈದ್ಯರ ಸಲಹೆಯನ್ನು ಮೊದಲು ಪಡೆಯಿರಿ.

ತಿಂಗಳ ಮುಟ್ಟನ್ನು ಪಡೆಯುವುದು ಹೇಗೆ? (How to get periods?)

ತಿಂಗಳ ಮುಟ್ಟು ಅಥವಾ ಋತುಸ್ರಾವ ಎಂದು ಸಹ ಕರೆಯಲ್ಪಡುವ ಇದು ದೇಹದ ಸ್ವಾಭಾವಿಕ ಪ್ರಕ್ರಿಯೆ, ಇದು ಸಾಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿ ಪ್ರಾರಂಭಿಸಿ ಋತುಬಂಧದವರೆಗೆ ಮುಂದುವರೆಯುತ್ತದೆ. ಮುಟ್ಟನ್ನು ‘ಪಡೆಯಲು’ನೀವು ಸಕ್ರಿಯವಾಗಿ ಏನನ್ನೂ ಮಾಡಬೇಕಾಗಿಲ್ಲ; ಸಾಮಾನ್ಯವಾಗಿ ನೀವು ಸುಮಾರು 9 ರಿಂದ 16 ವರ್ಷಗಳೊಳಗಾಗಿ ಪಡೆಯುವಿರಿ. ಆದರೆ ಪ್ರತಿಯೊಬ್ಬರೂ ವಿಭಿನ್ನ. ನಿಮಗೆ ಮುಟ್ಟು ಪ್ರಾರಂಭವಾಗದೆ ಅದರ ಬಗ್ಗೆ ನಿಮಗೆ ಕಾಳಜಿಯಿದ್ದಲ್ಲಿ ನಿಮ್ಮ ಸಂತಾನೋತ್ಪತ್ತಿ ಆರೋಗ್ಯ ಸರಿಯಾಗಿದೆಯೇ ಎಂದು ತಿಳಿದುಕೊಳ್ಳಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಮುಟ್ಟನ್ನು ತಕ್ಷಣ ಪಡೆಯಲು ಅತ್ಯುತ್ತಮ ಪಾನೀಯ ಯಾವುದು? (What is best to drink to get periods immediately?)

ತಕ್ಷಣ ಮುಟ್ಟನ್ನು ಪ್ರಚೋದಿಸುವಂತಹ ಯಾವುದೇ ವಿಧಾನಗಳಿಲ್ಲ. ನಿಮ್ಮ ದೇಹವು ಅಸ್ವಭಾವಿಕವಾಗಿ ಕೆಲಸ ಮಾಡುವುದಿಲ್ಲ. ಆದರೆ ಈ ಕೆಳಗೆ ಪಟ್ಟಿಮಾಡಲಾದ 4 ಪಾನೀಯಗಳನ್ನು ಪ್ರಯತ್ನಿಸಬಹುದು:

  • ಅರಿಶಿಣ ಕಷಾಯ ಅಥವಾ ಅರಿಶಿಣ-ಹಾಲು
  • ಶುಂಠಿ ಚಹ
  • ಕೊತ್ತಂಬರಿ ಬೀಜವನ್ನು ಕುದಿಸಿದ ನೀರು
  • ಜೀರಿಗೆಯನ್ನು ಕುದಿಸಿದ ನೀರು.

Popular Searches

Comments

facebook twitter whatsapp whatsapp
Leave a Reply

Your email address will not be published. Required fields are marked *

Start using RIO Heavy Flow Pads during your heavy flow

Anti-bacterial SAP

Guards not wings

Odour lock